ಕಾವ್ಯಯಾನ

ಇವಳು_ಅವಳೇ ! ಹರ್ಷಿತಾ ಕೆ.ಟಿ. ಅಲಂಕಾರದ ಮೇಜಿಗೆ ಹಿಡಿದಿದ್ದ ಧೂಳು ಹೊಡೆಯುತ್ತಿದ್ದ ನನ್ನ ಶೂನ್ಯ ದೃಷ್ಟಿಗೆ ಅಚಾನಕ್ಕಾಗಿ ಕಂಡಳಿವಳು ನೀಳ್ಗನ್ನಡಿಯ ಚೌಕಟ್ಟಿನೊಳಗೆ ಒತ್ತಿ ತುಂಬಿಸಿದಂತೆ ಉಸಿರು ಕಟ್ಟಿಕೊಂಡು ನಿಂತಿದ್ದವಳು ಬೆಚ್ಚಿ ಹಿಂಜಗಿದು ಕ್ಷಣಗಳೆರೆಡು ಗುರುತು ಸಿಗದೆ ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ ಅವಳೂ ಚಿಕ್ಕದಾಗಿಸಿದಳು ಗುಳಿ ಬಿದ್ದ ಎರಡು ಗೋಲಿಗಳನು ಅರೇ.. ನಾನೇ ಅದು! ಎಷ್ಟು ಬದಲಾಗಿದ್ದೇನೆ? ನಂಬಲಾಗದಿದ್ದರೂ ಕನ್ನಡಿಯ ಮೇಲೆ ಬೆರಳಾಡಿಸಿ ಅವಲೋಕಿಸಿದೆ ಗುಳಿಬಿದ್ದ ಕೆನ್ನೆಗಳಲಿ ಈಗ ನಕ್ಷತ್ರಗಳಿಲ್ಲ ಬರೇ ಕಪ್ಪುಚುಕ್ಕೆಗಳು, ಮೊಡವೆಯ ತೂತುಗಳು ಅವರು … Continue reading ಕಾವ್ಯಯಾನ